ಎಲ್ಲರಿಗೂ ನಮಸ್ಕಾರ, ನೀವು ಕೂಡಾ ಗಂಗಾ ಕಲ್ಯಾಣ ಉಚಿತ ಬೋರ್‌ವೇಲ್ ಯೋಜನೆಗೆ ಅರ್ಜಿ ಸಲ್ಲಿಸಬೇಕೆ..? ನಿಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಲು, ಪಂಪ್ ಮೋಟಾರ್ ಮತ್ತು ವಿದ್ಯುದ್ಧೀಕರಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಬೇಕೆ? Ganga Kalyana Scheme 2024 ಯಲ್ಲಿ ಎಷ್ಟು ಸಹಾಯಧನ ಸಿಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಓದಿರಿ.
Karnataka Ganga Kalyana Scheme 2024:
ಯೋಜನೆಯ ಹೆಸರು: ಗಂಗಾ ಕಲ್ಯಾಣ ಯೋಜನೆ
ಸಹಾಯಧನ ಮೊತ್ತ: 3.75 ಲಕ್ಷ ರೂ. ಮತ್ತು 4.75 ಲಕ್ಷ ರೂ.
ಯೋಜನೆಯ ವಿವರಣೆ:
ಗಂಗಾ ಕಲ್ಯಾಣ ಯೋಜನೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೈಯಕ್ತಿಕ ಕೊಳವೆ ಬಾವಿಯನ್ನು ಕೊರೆದು, ಪಂಪ್ ಮೋಟಾರ್ ಮತ್ತು ವಿದ್ಯುದ್ದೀಕರಣವನ್ನು ನೆರವೇರಿಸುವ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ಸಂಪೂರ್ಣ ಸಹಾಯಧನ ಪಡೆಯಬಹುದಾಗಿದೆ.
ಸಹಾಯಧನ ವಿಸ್ತಾರ:
- ಘಟಕ ವೆಚ್ಚ: 4.75 ಲಕ್ಷ ರೂ.
- ಸಹಾಯಧನ: 4.25 ಲಕ್ಷ ರೂ.
- ವಿದ್ಯುದ್ದೀಕರಣಕ್ಕೆ: 75,000 ರೂ.
- ಘಟಕ ಪೂರ್ಣಗೊಳ್ಳದ ಪರಿಸ್ಥಿತಿಯಲ್ಲಿ: 50,000 ರೂ. ಸಾಲ ಶೇ. 4 ಬಡ್ಡಿದರದಲ್ಲಿ.
ಇತರೆ ಜಿಲ್ಲೆಗಳ ಜನರಿಗೆ:
- ಘಟಕ ವೆಚ್ಚ: 3.75 ಲಕ್ಷ ರೂ.
- ಸಹಾಯಧನ: 3.25 ಲಕ್ಷ ರೂ.
- ವಿದ್ಯುದ್ದೀಕರಣಕ್ಕೆ: 75,000 ರೂ.
- ಘಟಕ ಪೂರ್ಣಗೊಳ್ಳದ ಪರಿಸ್ಥಿತಿಯಲ್ಲಿ: 50,000 ರೂ. ಸಾಲ ಶೇ. 4 ಬಡ್ಡಿದರದಲ್ಲಿ.
ಯೋಜನೆಯ ಅರ್ಹತೆಯ ವಿವರ:
ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ: ಕನಿಷ್ಠ 1 ಎಕರೆ ಜಮೀನು ಇರಬೇಕು.
ಇತರೆ ಜಿಲ್ಲೆಗಳಲ್ಲಿ: ಕನಿಷ್ಠ 2 ಎಕರೆ ಮತ್ತು ಗರಿಷ್ಠ 5 ಎಕರೆ ಜಮೀನು ಇರಬೇಕು.
ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳು:
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಆದಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
- ಇತ್ತೀಚಿನ ಆರ್‌ಟಿಸಿ ಪ್ರತಿ
- ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣಪತ್ರ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಭೂ-ಕಂದಾಯ ಪಾವತಿಸಿದ ರಸೀದಿ
- ಸ್ವಯಂ ಘೋಷಣೆ ಪತ್ರ
- ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಲಿಂಕ್‌ನ್ನು ಕೆಳಗೆ ನೀಡಲಾಗಿದೆ. ಅಥವಾ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: sevasindhu.karnataka.gov.in
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
- ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ: 31-08-2024
- ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ: 31-08-2024
- ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ: 31-08-2024
- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ: 30-08-2024
- ಸವಿತಾ ಸಮಾಜ ಅಭಿವೃದ್ಧಿ ನಿಗಮ: 31-08-2024
- ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ: 31-08-2024
- ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ: 31-08-2024
- ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ: 31-08-2024
- ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ: 31-08-2024
- ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ: 30-08-2024
ಇತರೆ ಮಾಹಿತಿಗಳನ್ನು ಓದಿ
0 Comments